ಆಕಾಶ ವೀಕ್ಷಣೆ ಕಾರ್ಯಕ್ರಮ

ಕೇಂದ್ರದಲ್ಲಿರುವ ದೂರದರ್ಶಕಗಳನ್ನು ಉಪಯೋಗಿಸಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ರಾತ್ರಿ ಆಕಾಶ ವೀಕ್ಷಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆಕಾಶ ಕಾಯಗಳು, ನಕ್ಷತ್ರ ಪುಂಜಗಳ ಪರಿಚಯ ಮತ್ತು ಗುರುತಿಸುವಿಕೆ, ಗ್ರಹಣಗಳು ಉಲ್ಕಾಪಾತ ಮತ್ತು ಇನ್ನಿತರ ವಿಶೇಷ ವಿದ್ಯಮಾನಗಳನ್ನು ಈ ಕಾರ್ಯಕ್ರಮಗಳಲ್ಲಿ ವೀಕ್ಷಿಸಬಹುದು.