News & Events

World Environment Day Celebrations - 2019 conducted on 8th of June 2019 at Pilikula Regional Science Center.


Zero Shadow Day activities conducted on 24th April 2019 at Pilikula Regional Science Center


Students’ innovative solutions shine at NXplorers Science Expo 2018-19

Shell and its implementation partner Learning Links Foundation for the ‘NXplorers’ programme are proud to announce the winners of the Mangalore edition of NXplorers Science Expo 2018-19 held on 21st February at the Pilikula Regional Science Center, Mangalore. Sree Rama Krishna school, Puttur won the 1st prize Sudana Residential school, Puttur took the 2nd prize school took home the 3rd prize Sree Rama Krishna Kannada Medium School, Ramakunja  


ಅಧ್ಯಾಪಕರಿಗೆ ರಸಾಯನಶಾಸ್ತ್ರ ಪ್ರಯೋಗಗಳ ಪ್ರಾತ್ಯಕ್ಷಿಕೆ

ದಿನಾಂಕ 29.01.2019ರಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರವು ಬಿ.ಎ.ಎಸ್.ಎಫ್.ಇಂಡಿಯಾ ಇವರ ಸಹಯೋಗದೊಂದಿಗೆ ಹಾಗೂ ದ. ಕ. ಸಾರ್ವಜನಿಕ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಮಂಗಳೂರು ನಗರದ ಉತ್ತರ ಮತ್ತು ದಕ್ಷಿಣ ವಲಯದ ಸರಕಾರಿ ಪ್ರೌಢಶಾಲೆಗಳಿಗೆ ರಸಾಯನಶಾಸ್ತ್ರ ಅಧ್ಯಾಪನಕ್ಕೆ ಸಂಬಂಧಿಸಿದ ರಸಾಯನಶಾಸ್ತ್ರ ಪ್ರಯೋಗಗಳ ಪ್ರಾತ್ಯಕ್ಷಿಕೆಗಳನ್ನು ಸೂರತ್ಕಲ್‍ನ ಬಿ.ಎ.ಎಸ್.ಎಫ್.ನ ಕ್ಯಾಂಪಸ್‍ನಲ್ಲಿ ಏರ್ಪಡಿಸಲಾಗಿತ್ತು.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ. ವಿ. ರಾವ್, ಮಾತನ್ನಾಡುತ್ತಾ ಸರ್ಕಾರಿ ಪ್ರೌಢ ಶಾಲೆಗಳ ಅಧ್ಯಾಪಕರ ಕೋರಿಕೆಯಂತೆ ವಿಜ್ಞಾನ ಕೇಂದ್ರವು ಹಲವು ಕಾರ್ಯಕ್ರಮಗಳನ್ನು ನಡೆಸಿದ್ದು ಈಗ ಬಿ.ಎ.ಎಸ್.ಎಫ್. ಇಂಡಿಯಾ ಇವರ ನೆರವಿನೊಂದಿಗೆ ರಸಾಯನಶಾಸ್ತ್ರ ಪ್ರಯೋಗಗಳ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು ಇಂತಹ ಕಂಪನಿಗಳು ತಮ್ಮ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಸಹಾಯಹಸ್ತ ನೀಡಲು ಮುಂದೆ ಬಂದರೆ ಸರಕಾರಿ ಪ್ರೌಢಶಾಲೆಗಳ ಅಭಿವೃದ್ಧಿಯಾಗುವುದರಲ್ಲಿ ಎರಡು ಮಾತಿಲ್ಲ ಎಂದರು. ಬಿ.ಎ.ಎಸ್.ಎಫ್. ಇಂಡಿಯಾ, ಮಂಗಳೂರು ಘಟಕದ ನಿರ್ದೇಶಕ ಶ್ರೀ ಶ್ರೀನಿವಾಸ್ ಪ್ರಾಣೇಶ್ ಮಾತನಾಡಿ ರಸಾಯನಶಾಸ್ತ್ರವು ನಮ್ಮ ದಿನನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿದ್ದು, ಕೆಲವರಿಗೆ ರಸಾಯನಶಾಸ್ತ್ರ ಎಂದರೆ ಇದೊಂದು ಅಪಾಯಕಾರಿ ಎಂಬ ಮನೋಭಾವನೆ ಹೊಂದಿದ್ದು, ಇದರಿಂದ ಹೊರಬರಬೇಕಾಗಿದೆ. ತಮ್ಮ ಸಂಸ್ಥೆಯು ರಸಾಯನಶಾಸ್ತ್ರದ ಅಧ್ಯಯನ ಅಧ್ಯಾಪನಕ್ಕೆ ಹಲವು ಯೋಜನೆಗಳನ್ನು ಕೈಗೊಂಡಿದ್ದು ಮುಂದೆಯು ಸಹ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಸದಾ ಸಿದ್ಧ ಎಂದರು. ಡಾ. ಪರಾಗ್ ಕುಮಾರ್ ಟಾಂಕಿ ಪ್ರಾಸ್ತಾವಿಕನ್ನುಡಿಗಳನ್ನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಶ್ರೀಮತಿ ಶೋಭ ಎನ್., ಪೆÇ್ರ. ಜಯಂತ ಉಪಸ್ಥಿತರಿದ್ದರು. ಶ್ರೀ ಸಂತೋಷ ಪೈ ಸ್ವಾಗತಿಸಿದರೆ, ಶ್ರೀ ಮೈಕಲ್ ಡಿಸೋಜ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಣೆಗೈದರು.

ನಂತರ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ಹತ್ತು ತಂಡಗಳನ್ನಾಗಿ ಮಾಡಿ ಹತ್ತನೇ ತರಗತಿಯ ರಸಾಯನಶಾಸ್ತ್ರದ ಪ್ರಯೋಗಗಳ ಪ್ರಾತ್ಯಕ್ಷಿಕೆಗಳನ್ನು ಬಿ.ಎ.ಎಸ್.ಎಫ್.ನ ತಂಡವು ಮಾಡಿ ತೋರಿಸಿದರು. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯುರೇಟರ್ ಶ್ರೀ ಜಗನ್ನಾಥ್ ಹಾಗೂ ಶೈಕ್ಷಣಿಕ ಸಹಾಯಕ ಶ್ರೀ ಶರಣಯ್ಯ ಕೆಲವು ಭೌತಶಾಸ್ತ್ರದ ಪ್ರಯೋಗಗಳ ಪ್ರಾತ್ಯಕ್ಷಿಕೆಗಳನ್ನು ಕೂಡ ಮಾಡಿ ತೋರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಕಾರ್ಯಾಗಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಇಂತಹ ವಿಶೇಷ ಕಾರ್ಯಕ್ರಮಗಳು ಪಠ್ಯಕ್ರಮ ಬದಲಾದಾಗ ತುಂಬಾ ಉಪಯುಕ್ತವಾಗುತ್ತದೆ ಎಂದರು.


ಬಾಪು ಖಗೋಳ ಮೇಳ

ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ‘ಬಾಪು ಖಗೋಳ ಮೇಳ’ ಎಂಬ ಕಾರ್ಯಕ್ರಮವನ್ನು ದಿನಾಂಕ 25.01.2019 ರಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಚರಿಸಲಾಯಿತು. ಗಾಂಧೀಜಿಯವರ ಆಸಕ್ತಿಯ ವಿಷಯಗಳಾದ ಖಗೋಳಶಾಸ್ತ್ರ ಮತ್ತು ಆಕಾಶ ವೀಕ್ಷಣೆಯ ಸ್ಮರಣಾರ್ಥವಾಗಿ ನಡೆದ ಖಗೋಳ ಮೇಳದಲ್ಲಿ ದೆಹಲಿಯ ನೆಹರು ತಾರಾಲಯದ ನಿರ್ದೇಶಕಿ ಡಾ. ರತ್ನಶ್ರೀ ಇವರು ಪ್ರೌಢ ಶಾಲಾ ಅಧ್ಯಾಪಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಗಾಂಧೀಜಿಯವರ ದೂರದರ್ಶಕದ ಮೂಲಕ ಆಕಾಶ ಕಾಯಗಳ ವೀಕ್ಷಣೆ ಹಾಗೂ ಇದನ್ನು ಬೇರೆಯವರಿಗೆ ವಿವರಿಸುವ ಉತ್ಸುಕತೆ ಬಗ್ಗೆ ಸವಿವರವಾಗಿ ಹೇಳಿದರು. ನಂತರ ಖಗೋಳಶಾಸ್ತ್ರದ ಆಸಕ್ತಿಯ ವಿಷಯಗಳಾದ ವಿಶ್ವದ ಉಗಮ, ನಕ್ಷತ್ರಗಳು, ಬ್ರಹ್ಮಾಂಡ, ಸೌರವ್ಯೂಹ, ಇವುಗಳ ಬಗ್ಗೆ ಸಚಿತ್ರವಾಗಿ ತಿಳಿಸಿದರು.

ಉಪನ್ಯಾಸದ ಬಳಿಕ ಭಾಗವಹಿಸಿದ ವಿದ್ಯಾರ್ಥಿಗಳನ್ನು ತಂಡಗಳನ್ನಾಗಿ ಮಾಡಿ, ಸೂರ್ಯನ ಗೋಲದ ಅಳತೆಯ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಯಿತು. ಈ ವರ್ಷದ ಡಿಸೆಂಬರ್‍ನಲ್ಲಿ ಸಂಭವಿಸಲಿರುವ ಸೂರ್ಯ ಗ್ರಹಣದ ವೀಕ್ಷಣೆ ಬಗ್ಗೆ ಉಪಯೋಗವಾಗುವ ಉಪಕರಣವನ್ನು ಬಂದ ತಂತ್ರಜ್ಞರು ತೋರಿಸಿ ಅದನ್ನು ಮಾಡುವ ವಿಧಾನವನ್ನು ವಿವರಿಸಿ ತೋರಿಸಿಕೊಟ್ಟರು.

ಇಡೀ ಕಾರ್ಯಕ್ರಮದ ಬಗ್ಗೆ ಡಾ. ಕೆ. ವಿ ರಾವ್ ಪ್ರಸ್ತಾವನೆಗೈದರು. ಉದ್ಘಾಟನೆಯನ್ನು ಡಾ. ರತ್ನಶ್ರೀ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಅತಿಥಿಗಳಾಗಿ ಪೆÇ್ರ. ಜಯಂತ ಹಾಜರಿದ್ದರು. ಶರಣಯ್ಯ ಸ್ವಾಗತಿಸಿ, ವಿಘ್ನೇಶ್ ಭಟ್ ವಂದಿಸಿದರು. ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಡಾ. ರತ್ನಶ್ರೀ ಉತ್ತರಿಸಿ ಸಂದೇಹಗಳ ನಿವಾರಣೆಮಾಡಿ ಪ್ರಶ್ನೆಗಳ ಆಳದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.


‘ಅಂತರಾಷ್ಟ್ರೀಯ ಖಗೋಳೀಯ ಸಂಘಟನೆ’ ಶತಮಾನೋತ್ಸವ ಕಾರ್ಯಕ್ರಮ

ಭಾನುವಾರ ದಿನಾಂಕ 13.01.2019ರಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ‘ಅಂತರಾಷ್ಟ್ರೀಯ ಖಗೋಳೀಯ ಸಂಘಟನೆ’ (ಇಂಟರ್‍ನ್ಯಾಷನಲ್ ಅಸ್ಟ್ರೊನಾಮಿಕಲ್ ಯೂನಿಯನ್ - IAU)ಯ ಶತಮಾನೋತ್ಸವ ಅಂಗವಾಗಿ ಖಗೋಳಶಾಸ್ತ್ರ ಸಂಬಂಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಹವ್ಯಾಸಿ ಖಗೋಳ ಶಾಸ್ತ್ರಜ್ಞ ಪೆÇ್ರ. ಜಯಂತ ಹೆಚ್. ಇವರ ನೇತೃತ್ವದಲಿ ್ಲ ವಿಜ್ಞಾನ ಕೆಂದ್ರದ ಸಿಬ್ಬಂದಿಗಳಾದ ಶ್ರೀ ಜಗನ್ನಾಥ್, ಶ್ರೀ ವಿಘ್ನೇಷ್ ಭಟ್, ಶ್ರೀ ಶರಣಯ್ಯ ಹಾಗೂ ಇತರ ತಾಂತ್ರಿಕ ಸಿಬ್ಬಂದಿಗಳಿಂದ ವಿದ್ಯಾರ್ಥಿಗಳಿಗೆ ತಾವು ಮಾಡಬಹುದಾದ ಖಗೋಳಶಾಸ್ತ್ರಕ್ಕೆ ಸಂಬಂಧಿ ಸರಳ ಪ್ರಾತ್ಯಕ್ಷಿಕೆಗಳು ಮತ್ತು ಮಾದರಿಗಳ ತಯಾರಿ ಇವುಗಳಲ್ಲಿ ಉತ್ತರ-ದಕ್ಷಿಣ ದಿಕ್ಕು ಗುರುತಿಸುವುದು, ಸೌರ ಗಡಿಯಾರ ತಯಾರಿಸುವುದು ಹಾಗೂ ಚಂದ್ರನ ಅಮವಾಸೆ-ಹುಣ್ಣಿಮೆ-ಅಮವಾಸೆವರೆಗಿನ ಬೇರೆ ಬೇರೆ ಹಂತಗಳು ಅರ್ಥೈಸಿಕೊಳ್ಳುವುದು ಹಾಗೂ ಸಂಜೆ ವಿಜ್ಞಾನ ಕೇಂದ್ರದ ದೂರದರ್ಶಕಗಳ ಮೂಲಕ ರಾತ್ರಿ ಆಕಾಶ ವೀಕ್ಷಣೆ ಮತ್ತು ಅಂದಿನ ವಿದ್ಯಾಮಾನಗಳ ಬಗ್ಗೆ ಚರ್ಚಿಸಲಾಯಿತು. ಮಂಗಳೂರಿನ ಸುಮಾರು 25 ಶಾಲೆಗಳ 90 ವಿದ್ಯಾರ್ಥಿಗಳು ಹಾಗೂ ಸುಮಾರು 100 ಜನ ಅವರ ಪೆÇೀಷಕರು, ಶಿಕ್ಷಕರು, ಮತ್ತು ಸಾರ್ವಜನಿಕರು ಸಕ್ರೀಯವಾಗಿ ಭಾಗವಹಿಸಿದರು. ಮಾದರಿಗಳ ತಯಾರಿಕೆ ಮೂಲಕ ವಿಜ್ಞಾನದ ಕೆಲವು ಕುಶಲತೆಗಳನ್ನು ಮಕ್ಕಳು ಬಳಸುವುದರಿಂದ ತಮ್ಮ ಭಾಗವಹಿಸುವಿಕೆಯನ್ನು ತುಂಬಾ ಸಂತೋಷಪಟ್ಟರು.


ಮಂಗಳೂರು ವಲಯದ ಸರಕಾರಿ ಪ್ರೌಢಶಾಲೆಗಳಿಗೆ ರಸಾಯನಶಾಸ್ತ್ರ ಕಿಟ್ ವಿತರಣೆ

ದಿನಾಂಕ 20.12.2018ರಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರವು ಬಿ.ಎ.ಎಸ್.ಎಫ್. ಇಂಡಿಯಾ ಮತ್ತು ವಿಜಯಾ ಬ್ಯಾಂಕ್ ಸಹಯೋಗದೊಂದಿಗೆ ಹಾಗೂ ದ. ಕ. ಸಾರ್ವಜನಿಕ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಮಂಗಳೂರು ನಗರದ ಉತ್ತರ ಮತ್ತು ದಕ್ಷಿಣ ವಲಯದ ಸರಕಾರಿ ಪ್ರೌಢಶಾಲೆಗಳಿಗೆ ರಸಾಯನಶಾಸ್ತ್ರ ಅಧ್ಯಾಪನಕ್ಕೆ ಸಂಬಂಧಿಸಿದ ಕಿಟ್ ವಿತರಿಸುವ ಕಾರ್ಯಕ್ರಮವನ್ನು ನಗರದ ಸಂತ ಆಗ್ನೇಸ್ ಶಾಲೆಯಲ್ಲಿ ಏರ್ಪಡಿಸಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ, ಡಾ. ಕೆ. ವಿ. ರಾವ್, ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಸರ್ಕಾರಿ ಪ್ರೌಢ ಶಾಲೆಗಳ ಅಧ್ಯಾಪಕರ ಕೋರಿಕೆಯಂತೆ ವಿಜ್ಞಾನ ಕೇಂದ್ರವು ಹಲವು ಕಾರ್ಯಕ್ರಮಗಳನ್ನು ನಡೆಸಿದ್ದು ಈಗ ವಿಜಯಾ ಬ್ಯಾಂಕ್ ಮತ್ತು ಬಿ.ಎ.ಎಸ್.ಎಫ್. ಇಂಡಿಯಾ ಇವರ ಆರ್ಥಿಕ ನೆರವಿನೊಂದಿಗೆ ಈ ಕಿಟ್‍ಗಳನ್ನು ನೀಡುತ್ತಿದೆ. ಅಧ್ಯಾಪಕರಿಗೆ ಬೇಕಾಗುವ ಇನ್ನಿತರ ಕಾರ್ಯಕ್ರಮಗಳನ್ನು ಮುಂದೆಯು ಹಮ್ಮಿಕೊಳ್ಳುವ ಯೋಜನೆಗಳಿವೆ ಎಂದರು. ಅತಿಥಿಗಳಾಗಿ ವಿಜಯಾ ಬ್ಯಾಂಕ್‍ನ ಡೆಪ್ಯುಟಿ ಜನರಲ್ ಮ್ಯಾನೆಜರ್ ಎ. ಶ್ರೀಧರಮೂರ್ತಿ ಇವರು ಮಾತನಾಡುತ್ತಾ ವಿಜಯಾ ಬ್ಯಾಂಕ್ ಸಾಮಾಜಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು ಇಂತಹ ಸದುದ್ದೇಶದ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡುತ್ತಿದೆ ಎಂದರು. ಈ ನೆರವಿನ ಸದುಪಯೋಗವನ್ನು ಅಧ್ಯಾಪಕರು ಮಾಡಿಕೊಂಡು ಉತ್ತಮ ಫಲಿತಾಂಶವನ್ನು ನೀಡಬೇಕೆಂದು ಕರೆಕೊಟ್ಟರು. ಬಿ.ಎ.ಎಸ್.ಎಫ್. ಇಂಡಿಯಾದ ಮಂಗಳೂರು ಘಟಕದ ಹೆಚ್‍ಆರ್ ವಿಭಾಗದ ಮುಖ್ಯಸ್ಥ ಶ್ರೀ ನಟರಾಜ್ ಸಿ.ಎಂ. ಮಾತನಾಡಿ ತಮ್ಮ ಸಂಸ್ಥೆಯು ರಸಾಯನಶಾಸ್ತ್ರದ ಅಧ್ಯಯನ ಅಧ್ಯಾಪನಕ್ಕೆ ಹಲವು ಯೋಜನೆಗಳನ್ನು ಕೈಗೊಂಡಿದ್ದು ಮುಂದೆಯು ಸಹ ಇಂತಹ ಕಾರ್ಯಕ್ರಮಗಳನ್ನು ಉತ್ತೇಜಿಸುವುದೆಂದರು. ಸರ್ಕಾರಿ ಶಾಲೆಯ ವಿದ್ಯಾರ್ಥಿಯಾಗಿ ತನಗೆ ಅಲ್ಲಿಯ ಸಮಸ್ಯೆಗಳ ಅರಿವಿದೆ. ಅಧ್ಯಾಪಕರಿಗೆ ಬೇಕಾದ ತರಬೇತಿಯನ್ನು ಸಂಸ್ಥೆಯ ವತಿಯಿಂದ ನಡೆಸಬಹುದೆಂದರು. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ಶ್ರೀ ವಿ ಪ್ರಸನ್ನ ಅಧ್ಯಕ್ಷತೆ ವಹಿಸಿ ದೈನಂದಿನ ಜೀವನದಲ್ಲಿ ವಸ್ತುಗಳ ರಸಾಯನಶಾಸ್ತ್ರದ ಪ್ರಭಾವವನ್ನು ಗಮನಿಸಿದ್ದಲ್ಲಿ ಅಧ್ಯಯನ ಸುಲಭವಾಗುವುದೆಂದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಶ್ರೀಮತಿ ಶೋಭ ಎನ್. ಮತ್ತು ಕಿಟ್‍ಗಳನ್ನು ತಯಾರಿಸುವ ಉಸ್ತುವಾರಿ ವಹಿಸಿದ್ದ ಡಾ. ಜಯಂತ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಶ್ರೀ ಸ್ಟ್ಯಾನಿ ತಾವ್ರೋ ಧನ್ಯವಾದ ಸಮರ್ಪಣೆ ಮಾಡಿದರು. ಕೇಂದ್ರದ ಕ್ಯುರೇಟರ್ ಶ್ರೀ ಜಗನ್ನಾಥ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.


ಆಕಾಶ ವೀಕ್ಷಣೆ ಕಾರ್ಯಕ್ರಮ

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಹವ್ಯಾಸಿ ಖಗೋಳ ಶಾಸ್ತ್ರಜ್ಞರ ಸಂಘ, ಮಂಗಳೂರು ಇವರ ಸಹಯೋಗದಲ್ಲಿ ದಿನಾಂಕ 16.09.2018 ರಂದು ಸಾರ್ವಜನಿಕರಿಗೆ ರಾತ್ರಿ ಆಕಾಶ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಜ್ಞಾನ ಕೇಂದ್ರದ ದೂರದರ್ಶಕದ ಮೂಲಕ ಬೆಳ್ಳಿಯಂತೆ ಹೊಳೆಯುವ ಶುಕ್ರ, ಉಪಗ್ರಹಗಳೊಂದಿಗೆ ಗುರು, ಶನಿಯ ಬಳೆಗಳು ಮತ್ತು ಮಂಗಳ ಗ್ರಹಗಳನ್ನು ವೀಕ್ಷಿಸಲಾಯಿತು ಜತೆಗೆ ವೀಕ್ಷಕರಿಗೆ ಇತರ ನಕ್ಷತ್ರಗಳನ್ನು ಕೂಡ ಪರಿಚಯಸಲಾಯಿತು.

ಹವ್ಯಾಸಿ ಖಗೋಳ ಶಾಸ್ತ್ರಜ್ಞ ಪೆÇ್ರ. ಜಯಂತ್ ವೀಕ್ಷಕರ ಹಲವಾರು ಪ್ರಶ್ನೆಗಳಿಗೆ ಚರ್ಚಿಸಿ ಉತ್ತರಿಸಿದರು. ವಿಜ್ಞಾನ ಕೇಂದ್ರದ ಕ್ಯುರೇಟರ್ ಶ್ರೀ ಜಗನ್ನಾಥ ಗ್ರಹಗಳ ಕುರಿತು ಮಾಹಿತಿ ನೀಡಿದರು. ಶೈಕ್ಷಣಿಕ ಸಹಾಯಕ ಶರಣಯ್ಯ ಹಾಗೂ ಇತರರು ಉಪಸ್ಥಿತರಿದ್ದರು.


ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಖಗ್ರಾಸ ಚಂದ್ರಗ್ರಹಣ ವೀಕ್ಷಣೆ

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಹವ್ಯಾಸಿ ಖಗೋಳಶಾಸ್ತ್ರಜ್ಞನರ ಸಂಘ ಮಂಗಳೂರು ಜಂಟಿಯಾಗಿ ಆಯೋಜಿಸಿದ ಖಗ್ರಾಸ ಚಂದ್ರಗ್ರಹಣದ ವೀಕ್ಷಣೆಯ ಕಾರ್ಯಕ್ರಮದಲ್ಲಿ ಶತಮಾನದ ಸುಧೀರ್ಘ ಚಂದ್ರಗ್ರಹಣವನ್ನು ಸಾರ್ವಜನಿಕರು ಕುತೂಹಲದಿಂದ ಕಣ್ತುಂಬಿಕೊಂಡರು. ಶುಕ್ರವಾರ ರಾತ್ರಿ 11.54ಕ್ಕೆ ಗ್ರಹಣ ಸ್ಪರ್ಶವಾಗಿ 1 ಗಂಟೆಗೆ ಖಗ್ರಾಸ ಗ್ರಹಣವಾಗಿ ಮುಂಜಾನೆ 2.43ಕ್ಕೆ ಮೋಕ್ಷವಾಯಿತು. ಗ್ರಹಣದ ವೀಕ್ಷಣೆಯೊಂದಿಗೆ ಹತ್ತಿರದಲ್ಲಿ ಕಂಗೊಳಿಸುತ್ತಿದ್ದ ಮಂಗಳನ ದರ್ಶನವೂ ವೀಕ್ಷಕರಿಗೆ ಲಭಿಸಿತು.

ದೂರದರ್ಶಕ ಮತ್ತು ದುರ್ಬೀನುಗಳ ಮೂಲಕ ಈ ಅಪೂರ್ವ ವಿದ್ಯಮಾನಗಳ ವಿಕ್ಷಣೆಯ ಸಂಧರ್ಭದಲ್ಲಿ ಮೋಡಗಳ ದೆಸೆಯಿಂದ ಆಗಾಗ ಅಡಚಣೆಯುಂಟಾದರೂ ವೀಕ್ಷಕರು ತಾಳ್ಮೆಯಿಂದ ಈ ಸಮಯದಲ್ಲಿ ಹವ್ಯಾಸಿ ಖಗೋಳಶಾಸ್ತ್ರಜ್ಞ ಡಾ| ಜಯಂತ್ ಅವರು ನೀಡುತ್ತಿದ್ದ ವಿವರಣೆಗಳನ್ನು ಕೇಳಿ ಸಂಶಯಗಳನ್ನು ಪರಿಹರಿಸಿ ಕೊಂಡರು.


"Science Demonstrations for High School  Teachers" held during  25 July 2018 at Pilikula Regional Science Center.

ವಿದ್ಯಾರ್ಥಿಗಳ ಅಂತಸ್ಸತ್ವ ವೃದ್ಧಿಸಿ - ಶಿಕ್ಷಕರಿಗೆ ಸುಲಭ ಪ್ರಾತ್ಯಕ್ಷಿಕೆಗಳ ತರಬೇತಿಯಲ್ಲಿ ಶ್ರೀ ಬಾಗ್ಚಿ

ಸರಕಾರಿ ಶಾಲೆಗಳಲ್ಲಿ ವಿಜ್ಞಾನ ಕಲಿಕೆಯಲ್ಲಿ ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಅನುಸಾರವಾಗಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಜಿಲ್ಲೆಯ ಆಯ್ದ ಸರ್ಕಾರಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಸುಲಭ ಪ್ರಾತ್ಯಕ್ಷಿಕೆಗಳ ತರಬೇತಿ ಕಾರ್ಯಕ್ರಮವನ್ನು ದಿನಾಂಕ 25-07-2018ರಂದು ಏರ್ಪಡಿಸಲಾಗಿತ್ತು. ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದ ಕೊಲ್ಕತ್ತಾದ ಬಿರ್ಲಾ ಇಂಡಸ್ಟ್ರಿ ಮತ್ತು ಟೆಕ್ನಾಲಜಿ ಮ್ಯೂಜುಯಂನ ನಿವೃತ್ತ ನಿರ್ದೇಶಕರಾದ ಹಾಗೂ ಇಂತಹ ತರಬೇತಿ ಕಾರ್ಯಕ್ರಮಗಳನ್ನು ನಡೆಸಿ ಖ್ಯಾತರಾದ ಶ್ರೀ ಸಮರ್ ಕುಮಾರ್ ಬಾಗ್ಚಿ ಉದ್ಘಾಟಿಸಿದರು. ವಿಜ್ಞಾನ ವಿಷಯದಲ್ಲಿ ಆಸಕ್ತಿ ಮೂಡಿಸಲು ಶಿಕ್ಷಕರು ಮಾಡಬಹುದಾದ ಕಡಿಮೆ ವೆಚ್ಚದ ಬೋಧನಾ ಸಾಧನಗಳನ್ನು ತಯಾರಿಸಿ ಅವುಗಳ ಮೂಲಕ ವಿಜ್ಞಾನ ವಿಷಯವನ್ನು ವಿದ್ಯಾರ್ಥಿಗಳಲ್ಲಿ ಹೇಗೆ ಗಟ್ಟಿಗೊಳಿಸಬೇಕು ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು , ಮಾದರಿ ಪಾಠವನ್ನು ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಸಮ್ಮುಖದಲ್ಲಿ ಮಾಡಿ ತೋರಿಸಿ, ಹೇಗೆ ವಿಜ್ಞಾನವನ್ನು ಆಸಕ್ತಿದಾಯಕವಾಗಿ ಮಾಡಬಹುದೆಂದು ವಿವರಿಸಿದರು. ಅತಿಥಿಗಳಾಗಿ ಬಂದಿದ್ದ ಶ್ರೀ ಜಯಪ್ರಕಾಶ ನಾಯಕ್ ವೈಜ್ಞಾನಿಕ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಶ್ರೀ ಕೆ. ಜೆ. ಕುಮಾರ್ ನಿವೃತ್ತ ನಿರ್ದೇಶಕರು , ವಿ.ಐ.ಟಿ. ಯಂ ಬೆಂಗಳೂರು ಇವರು ಶಿಕ್ಷಕರು ಕೈಗೊಳ್ಳಬಹುದಾದ ಪರಿಸರ ಸಂಬಂಧಿ ಶೈಕ್ಷಣಿಕ ಕಾರ್ಯಕ್ರಮಗಳು, ಅನುದಾನ ಪಡೆಯುವ ಬಗೆಗಳ ಬಗ್ಗೆ ವಿವರಿಸಿದರು.

ಶ್ರೀ ಬಸು ಅವರು ಅತಿಥಿಗಳನ್ನು ಪರಿಚಯಿಸಿದರು. ಶ್ರೀ ರಾಧಾಕೃಷ್ಣ ಭಟ್ ತರಬೇತಿಯ ಉಪಯೋಗಗಳನ್ನು ತರಗತಿಯಲ್ಲಿ ಅನುಸರಿಸಲು ಕರೆಯಿತ್ತರು.

ಕಾರ್ಯಕ್ರಮದ ಕೊನೆಯಲ್ಲಿ ನಡೆದ ಸಂವಾದದಲ್ಲಿ ಈ ಬಾರಿಯ ಹತ್ತನೇ ತರಗತಿಯ ಫಲಿತಾಂಶ ಉತ್ತಮಪಡಿಸಲು ವಿಜ್ಞಾನ ಬೋಧನೆಗೆ ಸಹಕಾರಿಯಾಗಲು ಯಾವ ಪ್ರಯತ್ನಗಳನ್ನು ಮಾಡಬಹುದು ಎಂಬುದರ ಬಗ್ಗೆ ಡಾ| ಕೆ. ವಿ ರಾವ್ ಅಧ್ಯಾಪಕರೊಂದಿಗೆ ಚರ್ಚಿಸಿದರು.

ಕಾರ್ಯಕ್ರಮ ನಿರೂಪಣೆಯನ್ನು ಶ್ರೀ ಜಗನ್ನಾಥ್ ಮಾಡಿದರು . ಕು. ವಂದನಾ ಧನ್ಯವಾದ ಸಮರ್ಪಿಸಿದರು.


ಶತಮಾನದ ದೀರ್ಘಾವಧಿ ಚಂದ್ರಗ್ರಹಣ ಮತ್ತು ಭೂಮಿಯ ಸಮೀಪ ಮಂಗಳ

ಈ ಶತಮಾನದ ದೀರ್ಘಾವಧಿ ಚಂದ್ರಗ್ರಹಣವು ಜುಲೈ 27 ರಾತ್ರಿ ಮತ್ತು 28ರಂದು ಮುಂಜಾನೆ ಸಂಭವಿಸಲಿದೆ. ಜುಲೈ 27ರ ರಾತ್ರಿ 11.54ಕ್ಕೆ ಚಂದ್ರಗ್ರಹಣವು ಆರಂಭವಾಗಲ್ಲಿದ್ದು ಮಧ್ಯರಾತ್ರಿ 1 ಗಂಟೆಯಿಂದ 2.43ರವರೆಗೆ ಸಂಪೂರ್ಣ ಗ್ರಹಣ ಗೋಚರಿಸಲಿದೆ. ಜು. 28 ಮುಂಜಾನೆ 3.49ಕ್ಕೆ ಗ್ರಹಣವು ಬಿಡಲಿದ್ದು ಈ ವಿದ್ಯಮಾನವನ್ನು ಬರಿಗಣ್ಣಿನಿಂದ ನೋಡಬಹುದು. ಭೂಮಿಯ ವಾತಾವರಣದಲ್ಲಿ ಹಾದುಹೋಗುವ ಸೂರ್ಯನ ಕಿರಣಗಳ ಚದುರುವಿಕೆಯಿಂದ ಚಂದ್ರನು ರಕ್ತವರ್ಣದಲ್ಲಿ ಕಂಡುಬರುತ್ತಾನೆ.

ಇದರೊಂದಿಗೆ ಕಳೆದ 15 ವರ್ಷದ ಅವಧಿಯಲ್ಲೇ ಭೂಮಿಗೆ ಮಂಗಳ ಗ್ರಹ ಹತ್ತಿರದಲ್ಲಿದ್ದು , ಜುಲೈ 27ರಂದು ಸೂರ್ಯ , ಭೂಮಿ ಮತ್ತು ಮಂಗಳ ಒಂದೇ ಸಾಲಿನಲ್ಲಿ ಬರಲಿವೆ. ಭೂಮಿ ಹಾಗು ಮಂಗಳ ಗ್ರಹಗಳ ನಡುವಿನ ಅಂತರ ಜುಲೈ 31ನೇ ತಾರೀಖಿನಂದು ಕಡಿಮೆ ಇರಲಿದ್ದು ಆ ದಿನ ಮಂಗಳ ಗ್ರಹ ಪ್ರಕಾಶಮಾನವಾಗಿರುತ್ತದೆ.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಲ್ಲಿ ರಾತ್ತಿ 11.30 ರಿಂದ 3.30ರ ವರೆಗೆ ಈ ಖಗೋಳ ವಿದ್ಯಮಾನವನ್ನು ವೀಕ್ಷಿಸಲು ದೂರದರ್ಶಕ ಮತ್ತು ದುರ್ಬೀನುಗಳ ವ್ಯವಸ್ಥೆ ಮಾಡಲಾಗಿದೆ. ಮೋಡಗಳ ಅಡಚಣೆ ಇಲ್ಲದಿದ್ದಲ್ಲಿ ಆಸಕ್ತ ವೀಕ್ಷಕರು ಇದರ ಸದುಪಯೋಗ ಪಡೆಯಬಹುದಾಗಿದೆ.


ಭೂಮಿಯ ಹತ್ತಿರ ಶನಿ

ಸೂರ್ಯನ ಸುತ್ತ ಸುತ್ತುತ್ತಿರುವ ಭೂಮಿ ಮತ್ತು ಹೊರಗಿನ ಪಥದಲ್ಲಿ ಸುತ್ತುತ್ತಿರುವ ಶನಿ ಗ್ರಹ ಜೂನ್ 27ರಂದು ಒಂದೇ ಸರಳರೇಖೆಯಲ್ಲಿ ಬರಲ್ಲಿದ್ದು ಅಂದು ಶನಿಗ್ರಹವು ಭೂಮಿಗೆ ಸಮೀಪದಲ್ಲಿರುತ್ತದೆ ಮತ್ತು ಪ್ರಕಾಶಮಾನವಾಗಿ ಕಂಡುಬರಲಿದೆ. ಸಾಮಾನ್ಯ ದೂರದರ್ಶಕದಿಂದ ನೋಡಿದರೂ ಅದರ ಉಂಗುರಗಳು ಮತ್ತು ಶನಿಗ್ರಹದ ಉಪಗ್ರಹಗಳಲ್ಲಿ ಒಂದಾದ ಟೈಟಾನ್ ಕಾಣಬಹುದು.

ಇಂದು ಪೂರ್ವಾಕಾಶದಲ್ಲಿ ಆಗ್ನೇಯ ದಿಕ್ಕಿನತ್ತ ಧನು ರಾಶಿಯಲ್ಲಿ ಸುಮಾರು ರಾತ್ರಿ 8.00 ರಿಂದ ಕಾಣಸಿಗುವ ಶನಿಗ್ರಹವು ನಂತರ ಮಧ್ಯರಾತ್ರಿಯಲ್ಲಿ ನಕ್ಷತ್ರದಂತೆ ಹೊಳೆಯುವುದನ್ನು ಕಾಣಬಹುದು. ಮಳೆ ಮೋಡಗಳ ಅಡ್ಡಿ ಇಲ್ಲದಿದ್ದರೆ ಆಸಕ್ತರು ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ದೂರದರ್ಶಕದ ಮೂಲಕ ಈ ವಿದ್ಯಮಾನವನ್ನು ಕಣ್ತುಂಬಿಕೊಳ್ಳಬಹುದು.


Workshop for High School Mathematics Teachers of D. K. District held during  19th & 20th June 2018 at PRSC.

ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 19.06.2018 ಮತ್ತು 20.06.2018 ರವರೆಗೆ ದ. ಕ. ಜಿಲ್ಲೆಯ ಆಯ್ದ ಪ್ರೌಢ ಶಾಲಾ ಗಣಿತ ಶಿಕ್ಷಕರಿಗೆ 10 ನೇ ತರಗತಿಯ ಗಣಿತ ಪಠ್ಯಕ್ರಮ ತರಬೇತಿ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ (ಕೆ.ಎಸ್.ಸಿ.ಎಸ್.ಟಿ.), ಬೆಂಗಳೂರು ಹಾಗೂ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ದ. ಕ. ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿತ್ತು.

ಈ ಎರಡು ದಿನಗಳ ಕಾರ್ಯಕ್ರಮದ ಉದ್ಘಾಟನೆಯನ್ನು ದ. ಕ. ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಶ್ರೀ ರಾಧಾಕೃಷ್ಣ ಭಟ್ ನೆರವೇರಿಸಿ ಮಾತನಾಡುತ್ತಾ ಈ ಬಾರಿ ಎನ್.ಸಿ.ಆರ್.ಟಿ.ಸಿ.

ಪಠ್ಯಕ್ರಮವನ್ನು 10ನೇ ತರಗತಿಯಲ್ಲಿ ಅಳವಡಿಸಲಾಗಿದ್ದು ಇದನ್ನು ಸರಿಯಾಗಿ ವಿದ್ಯಾರ್ಥಿಗಳಲ್ಲಿ ಮನನ ಮಾಡಲು ಇಂತಹ ತರಬೇತಿಗಳು ತುಂಬಾ ಉಪಯುಕ್ತವಾಗಿದ್ದು, ಹಲವಾರು ಕ್ಲಿಷ್ಟ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳುವಿರಿ ಎಂದರು. ಅತಿಥಿಗಳಾಗಿ ಪೆÇ್ರ. ವಿಜಯಾಕುಮಾರಿ, ವಿಜಯಾ ಕಾಲೇಜು, ಮೂಲ್ಕಿ ಭಾಗವಹಿಸಿದ್ದರು. ಡಾ. ಕೆ. ವಿ. ರಾವ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಘುನಾಥ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀ ವಾಸುದೇವ ರಾವ್ ಧನ್ಯವಾದ ಸಮರ್ಪಣೆಗೈದರು. ಶ್ರೀ ಜಗನ್ನಾಥ ಕಾರ್ಯಕ್ರಮ ನಿರೂಪಿಸಿದರು.

ನಂತರ ನಡೆದ ಅಧಿವೇಶನಗಳಲ್ಲಿ ಪೆÇ್ರ. ವಿಜಯಾ ಕುಮಾರಿ, ಪೆÇ್ರ. ಉದಯ ಕೆ., ಡಾ. ರಾಘವೇಂದ್ರ, ಪೆÇ್ರ. ಕಿರಣ್ ಹಂದೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಎರಡು ದಿನಗಳ ಕಾರ್ಯಕ್ರಮದ ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅಧಿವೇಶನಗಳ ಕುರಿತು ಅಧ್ಯಾಪಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶ್ರೀ ರಾಧಾಕೃಷ್ಣ ಭಟ್ ಎರಡು ದಿನಗಳ ಅನುಭವವನ್ನು ಅಧ್ಯಾಪಕರು ತಮ್ಮ ಶಾಲೆಯಲ್ಲಿ ಉಪಯೋಗಿಸಬೇಕೆಂದು ಕೋರಿದರು.


ವಿಶ್ವ ಪರಿಸರ ದಿನಾಚರಣೆ

ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದದಲ್ಲಿ ದಿನಾಂಕ 14.06.2018 ರಂದು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಒಂದು ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಡಾ|| ಜಿ. ಎನ್. ಇಂದ್ರೇಶ್, ವಿಜ್ಞಾನಿ ಮತ್ತು ಮುಖ್ಯಸ್ಥರು, ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯ, ಮೈಸೂರು ಇವರು ಉದ್ಘಾಟಕರಾಗಿ ಮತ್ತು ಅತಿಥಿಗಳಾಗಿ ಶ್ರೀ ರಾಜಶೇಖರ ಪುರಾಣಿಕ, ಹಿರಿಯ ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ ಮಂಗಳೂರು ಹಾಗೂ ಹಿರಿಯ ವೈಜ್ಞಾನಿಕ ಅಧಿಕಾರಿ, ಶ್ರೀ ಜಯಪ್ರಕಾಶ ನಾಯಕ್ ಇವರು ಪಾಲ್ಗೊಂಡಿದ್ದರು. ಜಿಲ್ಲೆಯ ಸುಮಾರು 350 ಬಿ. ಎಡ್. ಪ್ರಶಿಕ್ಷಣಾರ್ಥಿಗಳು, ಪ್ರೌಢ ಶಾಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಭಾಗವಹಿಸಿದ್ದರು.

ಅತಿಥಿಗಳು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕೇಂದ್ರದ ಆವರಣದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಉದ್ಘಾಟಕರು ಮಾತನಾಡುತ್ತಾ ಪ್ರಕೃತಿಯಿಂದ ಮಾನವ ಪ್ರತಿಯೊಂದನ್ನು ಕಲಿತು ತನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದಾನೆ. ಪ್ರತಿ ಜೀವಿಯೂ ತನಗೆ ಬೇಕಾದಷ್ಟು ಮಾತ್ರ ಪ್ರಕೃತಿಯಿಂದ ಪಡೆಯುತ್ತದೆ ಆದರೆ ಮಾನವ ಇದಕ್ಕೆ ವಿರುದ್ಧವಾಗಿ ಎಲ್ಲವನ್ನು ಪಡೆಯಲು ಪ್ರಯತ್ನಿಸುವುದು ಇಂದಿನ ಸಮಸ್ಯಗಳಿಗೆ ಕಾರಣ ಎಂದರು. ಪ್ಲಾಸ್ಟಿಕ್ ಮಾಲಿನ್ಯ ಹಿಮ್ಮೆಟಿಸುವುದಕ್ಕಿಂತ ತಮ್ಮ ಮನಸ್ಸಿನ ಕಲ್ಮಶಗಳನ್ನು ಹೋಗಲಾಡಿಸಬೇಕು ಅಗ ಬೇಕುಬೇಡಗಳ ಅಗತ್ಯದ ಅರಿವು ಆಗುವುದು ಇದನ್ನು ಯುವಜನಾಂಗ ಪಾಲಿಸಬೇಕೆಂದು ಕರೆ ನೀಡಿದರು. ಶ್ರೀ ರಾಜಶೇಖರ ಪುರಾಣಿಕ ಪ್ಲಾಸ್ಟಿಕ್ ಮಾಲಿನ್ಯ ಬಗ್ಗೆ ತಿಳುವಳಿಕೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿ ಸದಸ್ಯ ಕಾರ್ಯದರ್ಶಿ ಶ್ರೀ ವಿ ಪ್ರಸನ್ನ ಮಾತನಾಡುತ್ತಾ ಪಿಲಿಕುಳದ ಅನುಕೂಲತೆಗಳು ಹಾಗೂ ಸೌಲಭ್ಯಗಳು ಸಮಾಜದ ಉಪಯೋಗಕ್ಕಾಗಿ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವುದನ್ನು ಸದುಪಯೋಗಮಾಡಿಕೊಳ್ಳಬೇಕೆಂದರು. ನಿರ್ದೇಶಕ ಡಾ. ಕೆ. ವಿ. ರಾವ್ ಸ್ವಾಗತಿಸಿ ಪ್ರಸ್ತಾವನೆಗೈದರು. ಶ್ರೀ ಜಗನ್ನಾಥ್ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ರಾಮಕೃಷ್ಣ ಮರಾಟಿ ವಂದನಾರ್ಪಣೆಗೈದರು.

ಸಭಾ ಕಾರ್ಯಕ್ರಮದ ನಂತರ ಶ್ರೀ ಜಯಪ್ರಕಾಶ ನಾಯಕ್ ಪ್ಲಾಸ್ಟಿಕ್ ಮಾಲಿನ್ಯ ಹಿಮ್ಮೆಟಿಸಿ ಎಂಬ ಘೋಷವಾಕ್ಯದ ಬಗ್ಗೆ ವಿವರಿಸಿ ಈ ಸಮಸ್ಯೆಯನ್ನು ಯಾವ ರೀತಿಯಲ್ಲಿ ಎದುರಿಸಬಹುದು ಎಂಬುದನ್ನು ಮನವರಿಕೆ ಮಾಡಿಕೊಟ್ಟರು.

ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಬಿ. ಎಡ್. ವಿದ್ಯಾರ್ಥಿಗಳು ಪಿಲಿಕುಳದ ಒಳಗೆ ಸುತ್ತಾಡಿ ವಿವಿಧ ವಿಭಾಗಗಳು ಮತ್ತು ರಸ್ತೆಗಳ ಬದಿಯ ಪ್ಲಾಸ್ಟಿಕ್ ಕಸವನ್ನು ತುಂಬಾ ಉತ್ಸಾಹದಿಂದ ಹೆಕ್ಕಿ ಆವರಣವನ್ನು ಶುಚಿಗೊಳಿಸಿದರು. ಈ ಶ್ಲಾಘನೀಯ ಕಾರ್ಯವನ್ನು ಎಲ್ಲರೂ ಮೆಚ್ಚಿದರು.

ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಕೇಂದ್ರ ವಿಷಯದ ಮೇಲೆ ರಸಪ್ರಶ್ನೆ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಮತ್ತು ಬಿ. ಎಡ್. ವಿದ್ಯಾರ್ಥಿಗಳಿಗೆ ಜೀವವೈಧ್ಯತೆ, ಹಕ್ಕಿಗಳ ವಲಸೆ, ಪ್ರಕೃತಿಯೊಂದಿಗೆ ಸಹಜೀವನ ಇತ್ಯಾದಿಗಳ ಬಗ್ಗೆ ಮೈಸೂರಿನ ವಿಜ್ಞಾನಿಗಳು ಆಸಕ್ತಿದಾಯಕ ಮತ್ತು ಉಪಯುಕ್ತ ಮಾಹಿತಿ ನೀಡಿದರು. ಇದನ್ನು ವಿದ್ಯಾರ್ಥಿಗಳು ಬಹುವಾಗಿ ಪ್ರಶಂಶನೆಗೈದರು.

ಕಾರ್ಯಕ್ರಮದ ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.


ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ ಶ್ಲಾಘನೀಯ – ಡಾ. ಕೆ. ವಿ. ರಾವ್

ಕರ್ನಾಟಕ ಸರಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ರಾಜ್ಯದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ‘ಚೇತನ’ ಎಂಬ ಕಾರ್ಯಕ್ರಮವನ್ನು ಸ್ಯಾಮ್‍ಸಂಗ್ ಮತ್ತು ಇನ್ಫೊಸಿಸ್ ಫೌಂಡೇಶನ್ ಜತೆಗೂಡಿ ನಡೆಸುತ್ತಿದೆ. ಇದರ ಉದ್ದೇಶ ವಿದ್ಯಾರ್ಥಿಗಳ ಕನಸುಗಳಿಗೆ ರೆಕ್ಕೆಗಳನ್ನು ನೀಡುವುದು. ಒಂದು ವಾರದ ಅವಧಿಯ ಈ ಶಿಬಿರದಲ್ಲಿ ಅವರಿಗೆ ತಂತ್ರಜ್ಞಾನದ ವಿವಿಧ ಕ್ಷೇತ್ರಗಳ ಪರಿಚಯ, ಇರುವ ಅವಕಾಶಗಳು, ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮಗೆ ಬೇಕಾದ ಕ್ಷೇತ್ರಗಳನ್ನು ಆರಿಸುವಲ್ಲಿ ಸಹಾಯ, ವಿವಿಧ ಕ್ಷೇತ್ರಗಳ ತಜ್ಞರೊಡನೆ ಸಂವಾದ, ಮನೋರಂಜನೆ, ಯೋಗ ಇತ್ಯಾದಿಗಳನ್ನು ಹಮ್ಮಿಕೊಳ್ಳಲಾಗುವುದು. ಈ ಬಾರಿ ಮಂಗಳೂರಿನ ಮುಡಿಪು ಇನ್ಫೊಸಿಸ್ ಕ್ಯಾಂಪಸ್‍ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸುಮಾರು 400 ವಿದ್ಯಾರ್ಥಿನಿಯರು ಹಾಗೂ ಸಂಯೋಜಕರು ಭಾಗವಹಿಸುತ್ತಿದ್ದಾರೆ.

ಇದರ ಅಂಗವಾಗಿ ಪಿಲಿಕುಳದ ಭೇಟಿಗೆ ಐ.ಸಿ.ಟಿ. ಸೊಸೈಟಿಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮೌಲಿಶ್ರೀ, ಮಂಗಳೂರು ಕ್ಯಾಂಪ್ ಸಂಯೋಜಕರಾದ ಡಾ. ಶಂಶಾಕ್ ಶೆಟ್ಟಿ, ಇಲಾಖೆಯ ಶ್ರೀ ಪ್ರಭು ರಘುನಾಥ್, ಶ್ರೀ ಮೋಹನ್ ಇವರ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ದಿನಾಂಕ 30.05.2018 ರಂದು ಯೋಜಿತ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ. ವಿ. ರಾವ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿನಿಯರಿಗೆ ಶೈಕ್ಷಣಿಕವಾಗಿ ಬೆಳೆಯಲು ಅತ್ಯಂತ ಸ್ಫೂರ್ತಿದಾಯಕವಾಗಿದ್ದು, ಇದನ್ನು ರೂಪಿಸಿದ ಇಲಾಖೆಯ ಅಧಿಕಾರಿಗಳನ್ನು ಅಭಿನಂದಿಸಿ, ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ ಶ್ಲಾಘನೀಯ ಎಂದರು. ಪಿಲಿಕುಳ ಬೆಳೆದು ಬಂದ ದಾರಿ ಮತ್ತು ಧ್ಯೇಯೋದ್ಧೇಶಗಳನ್ನು ವಿವರಿಸಿದರು. ನಂತರ ಎಲ್ಲರಿಗೆ ತಾರಾಲಯ ಪ್ರದರ್ಶನ, ವಿಜ್ಞಾನ ಕೇಂದ್ರದ ಗ್ಯಾಲರಿಗಳ ಭೇಟಿ ಮತ್ತು ವಿಜ್ಞಾನ ಪ್ರಾತ್ಯಕ್ಷಿಕೆಗಳನ್ನು ಮಾಡಿ ತೋರಿಸಲಾಯಿತು. ವಿದ್ಯಾರ್ಥಿನಿಯರು ತುಂಬು ಆಸಕ್ತಿಯಿಂದ ಪ್ರಾತ್ಯಕ್ಷಿಕೆಗಳಲ್ಲಿ ಹಾಗೂ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಿರುವುದು ಎದ್ದು ಕಾಣುತ್ತಿತ್ತು. ನಂತರ ಜೈವಿಕ ಉದ್ಯಾನ ವನ, ಗುತ್ತು ಮನೆ, ಕರಕುಶಲ ಗ್ರಾಮ ಭೇಟಿಯನ್ನು ಸಹ ಆಯೋಜಿಸಲಾಗಿತ್ತು. ಡಾ. ಮೌಲಿಶ್ರೀ ಇತರ ಅಧಿಕಾರಿಗಳು ಪಿಲಿಕುಳದ ಸಂದರ್ಶನ ಬಹುವಾಗಿ ಮೆಚ್ಚಿಕೊಂಡರು.


" Workshop on Planetarium & Science Centers Architectural design and Construction" held during May 21 & 22, 2018 at PRSC


ಭೂಮಿಯ ಸನಿಹ ಬಂದ ಗುರು ಗ್ರಹದ ವೀಕ್ಷಣೆ

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 09.05.2018 ರ ರಾತ್ರಿ ಭೂಮಿಯ ಸನಿಹ ಬಂದ ಗುರುವಿನ ವೀಕ್ಷಣೆಗೆ ವ್ಯವಸ್ಥೆಮಾಡಲಾಗಿತ್ತು. ಈ ವಿದ್ಯಮಾನವು 399 ದಿನಗಳಿಗೊಮ್ಮೆ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಗುರುಗ್ರಹ ಪ್ರಕಾಶಮಾನವಾಗಿ ಕಂಡುಬರುತ್ತದೆ. ವಿಜ್ಞಾನ ಕೇಂದ್ರದ ದೂರದರ್ಶಕದ ಮೂಲಕ ಗುರು ಗ್ರಹ, ಅದರ ಪಟ್ಟೆಗಳು, ಕೆಂಪು ಮಚ್ಚೆ ಹಾಗೂ ಅದರ ಉಪಗ್ರಹಗಳಾದ ಅಯೋ, ಯುರೋಪಾ, ಗೆನಿಮೀಡ್ ಮತ್ತು ಕೆಲಿಸ್ಟೋಗಳನ್ನು ವೀಕ್ಷಕರಿಗೆ ತೋರಿಸಿ ಜತೆಗೆ ಇತರ ನಕ್ಷತ್ರಗಳನ್ನು ಕೂಡ ಪರಿಚಯಸಲಾಯಿತು.

ವಿಜ್ಞಾನ ಕೇಂದ್ರದ ಕ್ಯುರೇಟರ್ ಶ್ರೀ ಜಗನ್ನಾಥ ವಿದ್ಯಮಾನದ ಕುರಿತು ಮಾಹಿತಿ ನೀಡಿದರು. ಶೈಕ್ಷಣಿಕ ಸಹಾಯಕ ಶ್ರೀ ಶರಣಯ್ಯ ಬರೀಗಣ್ಣಿನಿಂದ ಆಕಾಶ ಕಾಯಗಳ ವೀಕ್ಷಣೆ ಕುರಿತು ಮಾಹಿತಿ ನೀಡಿದರು. ಹವ್ಯಾಸಿ ಖಗೋಳ ಶಾಸ್ತ್ರಜ್ಞ ಶ್ರೀ ನವೀನಚಂದ್ರ, ಶ್ರೀ ಗೌರವ ಹಾಗೂ ಇತರರು ಉಪಸ್ಥಿತರಿದ್ದರು.ಭೂಮಿಯ ಹತ್ತಿರ ಗುರು

ಸೂರ್ಯನ ಸುತ್ತ ಸುತ್ತುತ್ತಿರುವ ಭೂಮಿ ಮತ್ತು ಹೊರಗಿನ ಪಥದಲ್ಲಿ ಸುತ್ತುತ್ತಿರುವ ಗುರು ಗ್ರಹ ಮೇ 9 ರಂದು ಒಂದೇ ಸಾಲಿನಲ್ಲಿ ಬರಲಿದ್ದು, ಅಂದು ಗುರು ಗ್ರಹವು ಭೂಮಿಗೆ ಸಮೀಪದಲ್ಲಿರುತ್ತದೆ. ಈ ಅಪರೂಪದ ವಿದ್ಯಮಾನವು 399 ದಿನಗಳಿಗೊಮ್ಮೆ ಸಂಭವಿಸಲಿದ್ದು ಅಂದು ಗುರುಗ್ರಹ ಪ್ರಕಾಶಮಾನವಾಗಿ ಕಂಡುಬರುತ್ತದೆ. ಸಾಮಾನ್ಯ ದೂರದರ್ಶಕದಿಂದ ನೋಡಿದರೂ ಅದರ ಪಟ್ಟೆಗಳು, ಕೆಂಪು ಮಚ್ಚೆ ಹಾಗೂ ಅದರ ಉಪಗ್ರಹಗಳಾದ ಅಯೋ, ಯುರೋಪಾ, ಗೆನಿಮೀಡ್ ಮತ್ತು ಕೆಲಿಸ್ಟೋ ಕಾಣಬಹುದು.

ಇಂದು ಪೂರ್ವಾಕಾಶದಲ್ಲಿ ಆಗ್ನೇಯ ದಿಕ್ಕಿನತ್ತ ತುಲಾ ರಾಶಿಯಲ್ಲಿ ಅಂದಾಜು 350 ಕೋನದ ಎತ್ತರದಲ್ಲಿ ಸುಮಾರು ರಾತ್ರಿ 9:00 ಗಂಟೆಗೆ ಕಾಣಸಿಗುವ ಗುರು ಗ್ರಹವು ನಂತರ ಮಧ್ಯರಾತ್ರಿಯಲ್ಲಿ ಪ್ರಕಾಶಮಾನವಾಗಿ ನಕ್ಷತ್ರದಂತೆ ಹೊಳೆಯುವುದನ್ನು ಕಾಣಬಹುದು. ಆಸಕ್ತರು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ದೂರದರ್ಶಕದ ಮೂಲಕ ಈ ವಿದ್ಯಮಾನವನ್ನು ಕಣ್ತುಂಬಿಕೊಳ್ಳಬಹುದು.


Zero Shadow Day


PFA article of PRSC in Taranga article


Inauguration of Summer Camp 2018


Inauguration of Swami Vivekananda PlanetariumPress Coverage - Inauguration of Swami Vivekananda PlanetariumLunar eclipse programme organised at  Kulashekar, Mangaluru held on 31.01.2018. About 600 people witnessed the same.


69th  Republic Day Celebration at Dr. Shivarama Karantha Pilikula Nisargadhama. Sri Prasanna V. KAS, Executive Director, flag hoisted. Dr K V Rao, Sri Chandrakanth, Sri Babu Devadiga, Sri Ramakrishna Marathi, Sri Jagannath, Sri Dayasagar and others were present.


Sri Gaurav Gupta, IAS, Principal Secretary to Government, Department of IT,BT & S & T  visited Pilikula Regional Science Centre on Jan 10, 2018 to review the progress of Swami Vivekananda Planetarium.


Hon’ble Minister for Planning, Statistics, Science and Technology, Govt. of Karnataka visited Pilikula Regional Science Centre on Jan 06, 2018 to review the progress of Swami Vivekananda Planetarium.


Hon’ble Minister for Planning, Statistics, Science and Technology, Govt. of Karnataka visited on Dec 21, 2017  during dome installation.


NSS Annual Camp  2017-18 held on 29-12-2017 to 4-01-2018 for University College, Mangaluru


INSPIRE Internship Science Camp - 2017 held on Nov 14 - 18, 2017 at Pilikula Regional Science Centre.


" Swachhagrah Teacher Training Programme " held on 21/09/2017 at Pilikula Regional Science Centre.


Workshop on Solid waste management and Vermicomposting for Elected representatives & Officials of ULB's held on 13.08.2017 at Pilikula Regional Science Centre.


World Environment Day was celebrated on 05 – 06 – 2017 at Pilikula Regional Science Centre


Hon’ble Minister for Planning, Statistics, Science and Technology, Govt. of Karnataka visited Pilikula Regional Science Centre on May 29, 2017 to review the progress of Pilikula Planetarium.


 Eco club teacher training programme at Pilikula


International Women's Day - 2017


National Science Day Celebrations - 2017


Interactive Workshop on Geo Science Education for High School Teachers


DST - INSPIRE Internship Science Camp - 2016


Workshop on Mathematics Syllabus


Model Making workshop :

Glimpses of two days workshop on model making for technical staff of Regional science center and sub regional science center of Karnataka.

 


Eco Club Teacher Training


Laboratory Training for Science Teachers

World Environment Day 2016

 


Transit of Mercury – 9th May 2016

http://www.mangalorean.com/amateur-astronomers-enlighten-enthusiasts-mercurys-transit/
http://www.thehindu.com/news/cities/Mangalore/citizens-witness-celestial-spectacle/article8578361.ece


Workshop on Planetaria

Glimpses of ‘Workshop on Planetaria’ held at Pilikula Regional Science Centre, Mangaluru on April 21-22, 2016


NATIONAL SCIENCE DAY CELEBRATIONS– 2016

National Science Day Celebrations – 2016 were organized at Pilikula Regional Science Centre on 28.02.2016. Programs of the day included competitions like Quiz, Painting, and Pick & Speak for children, centered around the theme of the year ‘Make in India: S&T driven Innovations’. For the first time a program was organized for the Students of the Engineering Colleges of district also. Idea presentation and Project exhibition for innovation club members of the colleges. Winners were awarded cash prizes and mementos were given to the participating institution. Exhibition in Electronics, Biotechnology, Chemistry and Robotics were organized for the benefit of teacher and participants.
Glimpses of the program