ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಸ್ವಾಗತ

ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯ ಮತ್ತು ರಾಜ್ಯ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಜಂಟಿ ಸಹಯೋಗದಲ್ಲಿ ಸ್ಥಾಪಿಸಲಾದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಕರ್ನಾಟಕ ಸರಕಾರದ ಆಗಿನ ಮುಖ್ಯಮಂತ್ರಿಗಳು ಅಂದಿನ ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯ ಸಚಿವರ ಸಮಕ್ಷಮದಲ್ಲಿ ಅಕ್ಟೋಬರ್ 01, 2014ರಂದು ಉದ್ಘಾಟಿಸಿ ಲೋಕಾರ್ಪಣೆಗೈದರು. ಈ ವಿಜ್ಞಾನ ಕೇಂದ್ರವು ಮಂಗಳೂರು ನಗರದಿಂದ, ಮಂಗಳೂರು - ಕಾರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ, ಸುಮಾರು 12 ಕಿ.ಮೀ. ದೂರದಲ್ಲಿರುವ ವಾಮಂಜೂರಿನ ಪಿಲಿಕುಳದಲ್ಲಿದೆ. ಈ ಕೇಂದ್ರದ ನಿರ್ವಹಣೆ ಮತ್ತು ವಿಜ್ಞಾನ ಸಂಬಂಧಿ ಚಟುವಟಿಕೆಗಳಿಗೆ ವಾರ್ಷಿಕ ಅನುದಾನವನ್ನು ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್)ಯ ಮೂಲಕ ನೀಡುತ್ತಿದೆ. ವಿಜ್ಞಾನ ಕೇಂದ್ರದ ಆಡಳಿತವನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಮತ್ತು ವಿವಿಧ ಕ್ಷೇತ್ರಗಳ ತಜ್ಞರೊಳಗೊಂಡ ಆಡಳಿತ ಸಮಿತಿಯು ನೋಡಿಕೊಳ್ಳುತ್ತಿದೆ.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ‘ಮನೋರಂಜನೆಗಾಗಿ ವಿಜ್ಞಾನ’, ‘ಜೀವ ವೈವಿಧ್ಯತೆ’ ಮತ್ತು ‘ಮುಂಚೂಣಿ ತಂತ್ರಜ್ಞಾನ’ ಎಂಬ ಮೂರು ವಿಷಯಾಧಾರಿತ ಗ್ಯಾಲರಿಗಳಿವೆ. ಇವುಗಳಲ್ಲಿ ಸಂದರ್ಶಕರು ಮಾಡಿ ನೋಡಬಹುದಾದ ಪ್ರಯೋಗಗಳಿವೆ, ತಿಳಿಯಬಹುದಾದ ವಿಷಯಗಳ ಮಾದರಿಗಳಿವೆ. ಪ್ರತಿ ಮಾದರಿಗೂ ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ಸಂಕ್ಷಿಪ್ತ ವಿವರಣೆಗಳಿವೆ. ಆಸಕ್ತರು ಮಾದರಿಗಳನ್ನು ‘ನೋಡಿ ತಿಳಿಯುವ, ಮಾಡಿ ಕಲಿಯುವ’ ಅವಕಾಶವಿದೆ. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಅವರು ಕಲಿತ ವಿಷಯಗಳ ಬಗ್ಗೆ ಮನದಟ್ಟಾಗುವ ಸಂದರ್ಭಗಳು ಇಲ್ಲಿ ದೊರೆಯುತ್ತವೆ. ಕೇಂದ್ರದ ಶಿಕ್ಷಣ ಸಹಾಯಕರು ವಿವರಣೆಗಳಿಗೆ ಲಭ್ಯ. ವಿಶಾಲವಾದ ವಿಜ್ಞಾನದ ಪಾರ್ಕ್‍ನಲ್ಲಿ ಮಕ್ಕಳು ಆಟವಾಡಬಹುದಾದ, ವಿಜ್ಞಾನದ ತಳಹದಿಯ ಮೇಲೆ ನಿರ್ಮಿಸಿದ, ವಿಷಯಾಧಾರಿತ ಮಾದರಿಗಳಿವೆ. ಒಂದು ‘ಡೈನೋಸಾರ್‍ಪಾರ್ಕ್’ ಸಹ ಇದೆ. ಇಲ್ಲಿ ಡೈನೋಸಾರ್‍ಗಳ ಆಕೃತಿಗಳಿಗನುಗುಣವಾದ ಮಾದರಿಗಳನ್ನು ರೂಪಿಸಲಾಗಿದೆ. ಜನ ಸಾಮಾನ್ಯರಿಗೆ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಅವರಿಗೆ ಅಗತ್ಯವಾದ ಮತ್ತು ಅಧ್ಯಯನದಲ್ಲಿ ಪೂರಕವಾದ ವಿಷಯಗಳನ್ನು ತಿಳಿಯಲು, ಪ್ರಾತ್ಯಕ್ಷಿಕೆಗಳನ್ನು ನೋಡಲು ಮತ್ತು ಸಂದೇಹಗಳನ್ನು ಬಗೆಹರಿಸಿಕೊಳ್ಳಲು ವಿಜ್ಞಾನ ಕೇಂದ್ರಕ್ಕೆ ಭೇಟಿ ಅತ್ಯಂತ ಅವಶ್ಯಕ.

ಗ್ಯಾಲರಿಗಳು

ಮನೋರಂಜನಾ ಗ್ಯಾಲರಿ

ಮುಂದೆ ಓದಿ

ಜೀವಿವೈವಿಧ್ಯತೆಯ ಗ್ಯಾಲರಿ

ಮುಂದೆ ಓದಿ

ಮುಂಚೂಣಿ ತಂತ್ರಜ್ಞಾನ ಗ್ಯಾಲರಿ

ಮುಂದೆ ಓದಿ

ವಿಜ್ಞಾನ ಉದ್ಯಾನ ವನ

ಮುಂದೆ ಓದಿ

3ಡಿ ಥಿಯೇಟರ್

ಮುಂದೆ ಓದಿ

ತಾರಾ ಮಂಡಲ

ಮುಂದೆ ಓದಿ

ಸುದ್ದಿಗಳು ಮತ್ತು ಕಾರ್ಯಕ್ರಮಗಳು

Students’ innovative solutions shine at NXplorers Science Expo 2018-19


ಅಧ್ಯಾಪಕರಿಗೆ ರಸಾಯನಶಾಸ್ತ್ರ ಪ್ರಯೋಗಗಳ ಪ್ರಾತ್ಯಕ್ಷಿಕೆ

ಮುಂದೆ ನೋಡಿ