ಮುಂಚೂಣಿ ತಂತ್ರಜ್ಞಾನ ಗ್ಯಾಲರಿ

ಇಡಿಯ ವಿಶ್ವದಲ್ಲಿ ಈಗ ತಂತ್ರಜ್ಞಾನದ ಭರಾಟೆ. ಸೌರ, ಪವನ, ನ್ಯಾನೋ, ಬಯೋ, ಬಾಹ್ಯಾಕಾಶ ತಂತ್ರಜ್ಞಾನಗಳಂತಹ ಕ್ಷೇತ್ರಗಳಲ್ಲಿ ಅಪಾರ ಆಸಕ್ತಿಯ, ವಿಶೇಷ ಎನಿಸುವ ಉತ್ಪನ್ನಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದು ಎಲ್ಲರ ಗಮನ ಇಂತಹ ಕ್ಷೇತ್ರಗಳತ್ತ ಹರಿದಿದೆ. ಇವುಗಳನ್ನು ಮುಂಚೂಣಿಯ ತಂತ್ರಜ್ಞಾನಗಳು ಅಥವಾ ‘Cutting Edge Technologies’ ಎಂದು ಕರೆಯುತ್ತಿದ್ದಾರೆ. ನಾಳಿನ ತಂತ್ರಜ್ಞಾನಗಳ ಪರಿಚಯವನ್ನು ಮಾದರಿಗಳ ಮೂಲಕ ಇಲ್ಲಿ ನೀಡಲಾಗುತ್ತಿದೆ.

ಎಲ್ಲ ಗ್ಯಾಲರಿಗಳಲ್ಲಿ ಸಂದರ್ಶಕರಿಗೆ ವಿವಿಧ ರೀತಿಯ ಸಂವಹನದ ಕ್ರಿಯೆಗಳನ್ನು ಅನುಸರಿಸುವ ಪ್ರಯತ್ನ ಮಾಡಲಾಗಿದೆ. ಕೆಲವು ಮಾಡಿನೋಡಬಹುದಾದ ಪ್ರಯೋಗಗಳು, ಕೆಲವು ಪ್ರಾತ್ಯಕ್ಷಿಕೆಗಳು, ರಸಪ್ರಶ್ನೆಗಳು, ವಿಡಿಯೋ ನಿರೂಪಣೆಗಳು, ಸಂದರ್ಶಕರ ಸಾಮಾನ್ಯ ಜ್ಞಾನವನ್ನು ಎತ್ತರಕ್ಕೇರಿಸುವ ಮಾಹಿತಿಗಳು. ಇವೆಲ್ಲ ವಿಜ್ಞಾನ ತಂತ್ರಜ್ಞಾನಗಳಲ್ಲಿ ಆಸಕ್ತರಿಗೆ ಇನ್ನೂ ತಿಳಿಯುವ, ತಮ್ಮ ಮಕ್ಕಳಿಗೆ ಅವುಗಳನ್ನು ತಿಳಿಸುವ ಆಶಯವನ್ನು ಮೂಡಿಸುತ್ತವೆ. ಸಂಕ್ಷಿಪ್ತ ನಿರೂಪಣೆಗಳು ಇದಕ್ಕೆ ಸಹಾಯ ಮಾಡುತ್ತವೆ.

ಹೆಚ್ಚಿನ ಮಾಹಿತಿಗಾಗಿ ಚಿತ್ರದ ಮೇಲೆ ಕ್ಲಿಕಿಸಿ.